ಸೂರ್ಯ
	ಸೌರವ್ಯೂಹದ ಕೇಂದ್ರ ನಕ್ಷತ್ರ (ಸನ್). ಭೂಮಿಗೆ ಬೆಳಕು ಮತ್ತು ಉಷ್ಣ ನೀಡುವ ಪ್ರಮುಖ ಆಕರ. ಅನಿಲ ಸ್ಥಿತಿಯಲ್ಲಿ ನಿತ್ಯ ತಳಮಳಿಸುತ್ತಿರುವ ಗೋಳ. ಗರ್ಭದಲ್ಲಿಯ ಶಾಖಬೈಜಿಕ ಕ್ರಿಯೆಗಳ (ಥರ್ಮೊನ್ಯೂಕ್ಲಿಯರ್ ರಿಆ್ಯಕ್ಷನ್ಸ್) ಕಾರಣವಾಗಿ ಅತ್ಯುಜ್ಜ್ವಲತೆಗೆ ಕಾದು ಅತಿಶಯ ಉಷ್ಣ, ಪ್ರಕಾಶ ಮತ್ತು ಇತರ ವಿಕಿರಣ  ಪ್ರಕಾರಗಳನ್ನು ಮೊಗೆಯುತ್ತಿರುವ ಆಕಾಶ ಕುಲುಮೆ.

ಪ್ರಧಾನ ವೈಲಕ್ಷಣ್ಯಗಳು
 ಭೂಮಿಯಿಂದ ಸೂರ್ಯನ ಸರಾಸರಿ ದೂರ (ಖಗೋಳಮಾನ).................................(1.496±0.0003)x108 ಕಿಮೀ
 ತ್ರಿಜ್ಯ	..........................................(6.96±0.001)x105 ಕಿಮೀ
 ರಾಶಿ	..........................................(1.991±0.002)x1033 g 
 ಸರಾಸರಿ ಸಾಂದ್ರತೆ	...........................(1.41±0.002) g/ಛಿm3
 ಮೇಲ್ಮೈ ಗುರುತ್ವ	.............................(2.738±0.003)x104 ಛಿm/seಛಿ2  		    = 28 x ಭೂಮೇಲ್ಮೈ ಗುರುತ್ವ
 ಸಮಗ್ರ ಶಕ್ತಿ ಉತ್ಪಾದನೆ....................(3.86±0.03)x1033 eಡಿg/seಛಿ
 ಮೇಲ್ಮೈಯಲ್ಲಿ ಶಕ್ತಿ ಅಭಿವಾಹ(ಫ್ಲಕ್ಸ್).............(6.34±0.07)x1010 eಡಿg/ (ಛಿm2)(seಛಿ)
 ಪ್ರಭಾವೀಮೇಲ್ಮೈ ಉಷ್ಣತೆ..........................(5780±50) ಏ
 ಸಾಕ್ಷತ್ರಿಕ ಉಜ್ಜ್ವಲತಾಂಕ (ದ್ಯುತಿಗೋಚರ)..............	-26.73±0.03
 ಕಾಂತಿ (ದ್ಯುತಿಗೋಚರ)..........................	+4.84±0.03
 ಕ್ರಾಂತಿವೃತ್ತಕ್ಕೆ ಆವರ್ತನಾಕ್ಷದ ಬಾಗು..............70 
 ಆವರ್ತನಾವಧಿ..........................ಸುಮಾರು 27 ದಿವಸಗಳು. ಘನಕಾಯದ ತೆರದಲ್ಲಿ ಸೂರ್ಯ ಆವರ್ತಿಸುವುದಿಲ್ಲ. ಸಮ ಭಾಜಕೀಯದಲ್ಲಿ 25 ದಿವಸಗಳ ಅವಧಿ ಯಿಂದ ಧ್ರುವಗಳಲ್ಲಿ 3 ದಿವಸಗಳವರೆಗೆ ಆವರ್ತನಾವಧಿ ವ್ಯವಸ್ಥಿತ ವೃದ್ಧಿಯನ್ನು ಪ್ರದರ್ಶಿಸುತ್ತದೆ.
 ಸೂರ್ಯನಲ್ಲಿ ಅತಿಸಮೃದ್ಧವಾಗಿರುವ ಪರಮಾಣುಗಳ ಸಾಪೇಕ್ಷ ಸಂಖ್ಯೆಗಳು
 ಹೈಡ್ರೊಜನ್, ಊ	1,000,000	ಸಿಲಿಕಾನ್, Si	20
 ಹೀಲಿಯಮ್, ಊe	50,000-200,000	ಸಲ್ಫರ್, S 	8
 ಆಕ್ಸಿಜನ್, ಔ 	500	ಅಲ್ಯೂಮಿನಿಯಮ್,ಂಟ  	2
 ನೈಟ್ರೊಜನ್, ಓ	400	ಸೋಡಿಯಮ್, ಓಚಿ	2
 ಕಾರ್ಬನ್, ಅ	200	ಕ್ಯಾಲ್ಸಿಯಮ್, ಅಚಿ	1.5
 ಮೆಗ್ನೀಸಿಯಮ್, ಒg	33	ಕಬ್ಬಿಣ, ಈe	1.5

ಸೂರ್ಯನ ಸ್ವರೂಪ

ಅಭ್ಯಾಸದ ಸೌಕರ್ಯಕ್ಕಾಗಿ ಇದನ್ನು ಐದು ಭಾಗಗಳಾಗಿ ವಿಂಗಡಿಸ ಬಹುದು: 

	1. ದ್ಯುತಿಗೋಳ (ಫೆÇೀಟೊಸ್ಫಿಯರ್): ಬರಿಗಣ್ಣಿಗೆ ಕಾಣುವ ವೃತ್ತಾಕಾರದ ಸೂರ್ಯ ಬಿಂಬವಿದು. ವಾಸ್ತವಿಕವಾಗಿ ಇದರ ಅಂಚು (ಪರಿಧಿ) ಹಲವಾರು ಏರು ತಗ್ಗುಗಳಿಂದ ಕೂಡಿದೆ-ಬಿಂಬದ ಫೆÇೀಟೊ ಇದನ್ನು ತೋರಿಸುತ್ತದೆ. ಸೂರ್ಯಗರ್ಭದಲ್ಲಿ ಉಗಮಿಸುವ ಶಕ್ತಿ ದ್ಯುತಿಗೋಳದಿಂದ ಹೊರಗೆ ಪ್ರಸರಿಸಿ ನಮಗೆ ಬೆಳಕಾಗಿ ಕಾಣುವುದು ಮತ್ತು ಉಷ್ಣವಾಗಿ ಭಾಸವಾಗುವುದು.

	2. ವರ್ಣಗೋಳ (ಕ್ರೋಮೊಸ್ಫಿಯರ್): ದ್ಯುತಿಗೋಳದ ಮೇಲೆ ಸಾವಿರಾರು ಕಿಮೀಗಳವರೆಗೆ ಅನಿಲದ ಹಬೆ ವ್ಯಾಪಿಸಿರುವುದು. ಇದನ್ನು ರೋಹಿತದಲ್ಲಿ ವಿಶ್ಲೇಷಿಸಿ ಅಲ್ಲಿ ಎರಡು ಬಗೆಯ ಪದರಗಳಿರುವುದನ್ನು ಗುರುತಿಸಲಾಗಿದೆ ಒಂದು ವಿಪರ್ಯಯಕಾರಿ ಪದರ (ರಿವರ್ಸಿಂಗ್ ಲೇಯರ್) 8000 ಕಿಮೀ ಎತ್ತರದವರೆಗೆ; ಇದರಿಂದಲೂ ಮೇಲೆ 12,800 ಕಿಮೀ ಎತ್ತರದಿಂದ 14,400 ಕಿಮೀ ವರೆಗಿರುವುದು ವರ್ಣಗೋಳ. ಇದು ಸೂರ್ಯನಲ್ಲಿರುವ ಎಲ್ಲ ಧಾತುಗಳ ಹಬೆಯ ಮಿಶ್ರಣ. ಸಂಪೂರ್ಣ ಸೂರ್ಯಗ್ರಹಣದ ವೇಳೆ ದ್ಯುತಿವಲಯವನ್ನು ಚಂದ್ರಬಿಂಬ ಮರೆಮಾಡುವುದು. ಆಗ ಕೆಂಬಣ್ಣದಿಂದ (ಪಾಟಲವರ್ಣ) ಹೊಳೆಯುವ ವರ್ಣಗೋಳ ಎದ್ದು ಕಾಣುವುದು. ಮುಖ್ಯವಾಗಿ ವರ್ಣಗೋಳದಲ್ಲಿ ಹೈಡ್ರೊಜನ್, ಕ್ಯಾಲ್ಸಿಯಮ್ ಮತ್ತು ಹೀಲಿಯಮ್ ಅನಿಲಗಳ ಮಿಶ್ರಣ ಅಧಿಕವಾಗಿರುವುದರಿಂದ ಇದಕ್ಕೆ ಪಾಟಲವರ್ಣ ಒದಗಿದೆ.

	3. ಜ್ವಾಲಾಜಿಹ್ವೆ (ಪ್ರಾಮಿನೆನ್ಸ್): ಉರಿಯುತ್ತಿರುವ ಅನಿಲರಾಶಿಯಿಂದ ಸಹಸ್ರಾರು ಕಿಮೀ ಎತ್ತರಕ್ಕೆ ಅದರ ನಾಲಗೆ ಚಾಚುವುದುಂಟು. ವರ್ಣಗೋಳದ ಸರಹದ್ದು ಮೀರಿ ಚಾಚಿ ಉರಿಯುವ ಬೆಂಕಿ ನಾಲಗೆಗಳಿಗೆ ಜ್ವಾಲಾಜಿಹ್ವೆಗಳೆಂದು ಹೆಸರು. 24,000ದಿಂದ 48,000 ಕಿಮೀಗಳಷ್ಟು ಎತ್ತರ ಇವು ನೆಗೆಯುವುದುಂಟು. ಸೂರ್ಯಗೋಳದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ 20º-40º  ಅಕ್ಷಾಂಶಗಳ ವರೆಗಿನ ಪ್ರದೇಶಗಳಿಗೆ ಮಾತ್ರ ಇವು ಸೀಮಿತವಾಗಿವೆ.

	4. ಕರೋನ (ಕಿರೀಟ, ಮಕುಟ): ವರ್ಣಗೋಳದಿಂದಲೂ ಹೊರಗೆ ವ್ಯಾಪಿಸಿರುವ ಕ್ಷೀಣಕಾಂತಿಯ ಒಂದು ಗೋಳವಿದೆ. ಇದೇ ಕರೋನ. ಸಂಪೂರ್ಣ ಸೂರ್ಯಗ್ರಹಣ ಕಾಲದಲ್ಲಿ ವರ್ಣಗೋಳದಿಂದಲೂ ಹೊರಗೆ ವಿಶಾಲವಾಗಿ ವ್ಯಾಪಿಸಿರುವ ಕರೋನ, ತೆಳು ಮೋಡಗಳೆಡೆಯಿಂದ ಹೊಳೆಯುವ ಹುಣ್ಣಿಮೆಯ ಚಂದ್ರನ ಸುತ್ತಲೂ ಹಬ್ಬಿರುವ ಬೆಳಕಿನ ದಪ್ಪ ಉಂಗುರವನ್ನು ನೆನಪಿಗೆ ತರುವುದು. ಕರೋನದ ಹೊರ ಅಂಚು ಸ್ಫುಟವಾಗಿಲ್ಲ. ಹೀಗಾಗಿ ಅದರ ಆಕಾರವನ್ನು ನಿರ್ಣಯಿಸುವಂತಿಲ್ಲ.

	5. ಸೌರ ಕಲೆಗಳು (ಸನ್‍ಸ್ಪಾಟ್ಸ್): ದ್ಯುತಿಗೋಳದ ಮೇಲೆ ಸರಿಯುತ್ತಿರುವ ಕಪ್ಪು ಕಲೆಗಳನ್ನು ಆಗಾಗ ಕಾಣಲಾಗಿದೆ. ಸೂರ್ಯ ಬಿಂಬದ ಎಂದಿನ ಹಿನ್ನೆಲೆಯಲ್ಲಿ ತುಸು ಕಡಿಮೆ ಪ್ರಕಾಶದ ಉಷ್ಣತೆಯ ಪ್ರದೇಶಗಳು ಕಪ್ಪಾಗಿ ಕಾಣುವುದು ಸಹಜ. ಹಿರಿ ವಿಸ್ತಾರದ ಕಲೆಗಳನ್ನು ಬರಿಗಣ್ಣಿನಿಂದ, ಸೌರಕನ್ನಡಕದ ಅಥವಾ ಹೊಗೆ ಮುಸುಕಿದ ಗಾಜಿನ ಮೂಲಕ ನೋಡಬಹುದು. ಸೂರ್ಯಗರ್ಭದಲ್ಲಿ ಉರಿಯುತ್ತ ಕುದಿಯುತ್ತಿರುವ ಅನಿಲ ರಾಶಿ ಅಲ್ಲೋಲ ಕಲ್ಲೋಲವಾಗಿರುವುದು. ಮಂಥನದಲ್ಲಿರುವ  ಸಮುದ್ರದಲ್ಲಿ ದೈತ್ಯಾಕಾರದ ಸುಳಿಗಳುಂಟಾಗುವುವು. ಇವುಗಳ ಬಾಯಿ ದ್ಯುತಿಗೋಳದ ತಳದಲ್ಲಿ ಕುಣಿಗಳಂತೆ ಅಡಗಿರುವುವು. ಇವೇ ನಮಗೆ ಕಾಣುವ ಕಲೆಗಳು. 1947ರಲ್ಲಿ ಕಂಡ ದೊಡ್ಡದೊಂದು ಕಲೆಯ ವಿಸ್ತೀರ್ಣ 144,000x96,000 ಚ.ಕಿಮೀ ಇತ್ತು. ಕಲೆಯಲ್ಲಿಯ ಉಷ್ಣತೆ ಸುತ್ತಲಿನದಕ್ಕಿಂತ ಸು. 2000ºಅ ಕಡಿಮೆ. ಕಲೆಗಳು ಸಾಮೂಹಿಕವಾಗಿ ಹುಟ್ಟುವುವು; ದೊಡ್ಡ ಕಲೆ, ಅದರ ಹಿಂದೆ ಹಲವಾರು ಮರಿ ಕಲೆಗಳು. ಈ ಹಿಂಡು ಸೂರ್ಯಬಿಂಬದ ಮೇಲೆ ಸರಿಯುತ್ತ ಹೋಗಿ ಒಂದು ಅಂಚಿನಲ್ಲಿ ಮರೆಯಾಗಿ ಅದರ ಎದುರು ಅಂಚಿನಲ್ಲಿ ಕೆಲವು ದಿವಸಾನಂತರ ಮತ್ತೆ ಕಾಣಿಸಿಕೊಳ್ಳುವುದುಂಟು. ಸೂರ್ಯಗೋಳದ ಆವರ್ತನೆಯೇ ಇದರ ಕಾರಣ. ಕಲೆಗಳಿಗೆ ಪರಸ್ಪರ ಚಲನೆಯೂ ಉಂಟು. 1946-47ರಲ್ಲಿ ಕಾಣಿಸಿಕೊಂಡ ಕಲೆಗಳ ಹಿಂಡು ಸೂರ್ಯನ ಹೊರ ಮೈಯ್ಯ 14,762,430,000 ಚ.ಕಿಮೀ ಆಕ್ರಮಿಸಿತ್ತು. ಇದು ಸೂರ್ಯಗೋಳದ ಹೊರಮೈ ವಿಸ್ತಿರ್ಣದ ಸೇಕಡಾ ಅರ್ಧಕ್ಕಿಂತಲೂ ಕಡಿಮೆ.

ಕಲೆಗಳ ಏರಿಳಿತ ಸಾಧಾರಣವಾಗಿ ನಿಯತಕಾಲಿಕವಾಗಿದೆ. ಆವರ್ತನ ಅವಧಿü ಸುಮಾರು 10-11 ವರ್ಷ. ಆ ದಿನಗಳಂದು ಭೂಕಾಂತಕ್ಷೇತ್ರದಲ್ಲಿ ಕ್ಷೋಭೆಯುಂಟಾಗಿ ರೇಡಿಯೊದಲ್ಲಿ ಗಲಭೆ ಹಣುಕುವುದಿದೆ. ಕಲೆಗಳ ಹತ್ತಿರ ಕೆಲವು ಸಲ ಬೆಳಕು ಅತಿಯಾಗಿ ಪ್ರಜ್ವಲಿಸುವುದುಂಟು. ಇದಕ್ಕೆ ಉತ್ಕರ್ಷ ಎಂದು ಹೆಸರು. ಅಲ್ಲಿ ಇನ್ನೊಂದು ಬಗೆಯ ವಿಶೇಷತೆಯೂ ಇದೆ: ನಾರಿನಿಂದ ಹೆಣೆದು ಮಾಡಿದಂಥ ಬೆಳಕಿನ ಚುಂಗುಗಳು (ಫ್ಯಾಕ್ಯೂಲ). ಕಲೆಗಳಿಗೆ ಪೂರ್ವಭಾವಿಯಾಗಿ ಇವು ಬರುವುದುಂಟು. ಇವುಗಳಿಗೆ ಪ್ರತ್ಯೇಕ ಅಸ್ತಿತ್ವವೂ ಇದೆ.

	ಸೌರ ದಿವಸ: ಕಲೆಗಳ ಸರಿತದಿಂದ ಸೂರ್ಯನ ಆವರ್ತನಾವಧಿಯನ್ನು ನಿಗಮಿಸಬಹುದು. ಯಾವುದೇ ಘನವಸ್ತು ಆವರ್ತಿಸುವಾಗ ಅದರ ಮೇಲಿನ ವಿವಿಧ ಪ್ರದೇಶಗಳ ಸಾಪೇಕ್ಷಸ್ಥಾನಗಳು ವ್ಯತ್ಯಯಗೊಳ್ಳುವುದಿಲ್ಲ. ಆದರೆ ಉರಿಯುತ್ತ ಸುತ್ತುತ್ತಿರುವ ಅನಿಲಗೋಳದಲ್ಲಿ ಹೀಗಾಗದು. ಅನಿಲರಾಶಿಯ ನಿರಂತರ ಉದ್ರೇಕ, ಗೋಳದ ಸಮಗ್ರಾವರ್ತನೆ ಇವುಗಳ ಫಲಿತಾಂಶವಾಗಿ ಸೂರ್ಯಗೋಳದ ಆವರ್ತನವೇಗ ಮಧ್ಯರೇಖೆಯಲ್ಲಿ ಅಧಿಕ, ಧ್ರುವ ಭಾಗಗಳಲ್ಲಿ ಕಡಿಮೆ. ಈ ಭಾಗಗಳಲ್ಲಿ ಸೌರದಿವಸದ ಅವಧಿ ಅನುಕ್ರಮವಾಗಿ 24.65 ಮತ್ತು 34 ಭೂದಿವಸಗಳು. ಸೌರ ದಿವಸದ ಸರಾಸರಿ ಅವಧಿ 25.38 ಭೂದಿವಸಗಳು.

	ಸೌರ	ಶಕ್ತಿ: ಸೂರ್ಯಗರ್ಭದಲ್ಲಿ ನಿಹಿತವಾಗಿರುವ ಅಗಾಧ ಸಂಮರ್ದ ಮತ್ತು ಉಷ್ಣತೆಗಳ ಕಾರಣವಾಗಿ ಬೈಜಿಕ ಸಂಲಯನ ಕ್ರಿಯೆಗಳು ಸಂಭವಿಸುತ್ತಿರುವುವು. ಆಗ ಹೈಡ್ರೊಜನ್ ಬೀಜಗಳು ಬೆಸೆಯಲ್ಪಟ್ವು ಹೀಲಿಯಮ್ ಬೀಜಗಳು ಮೈದಳೆಯುತ್ತವೆ. ಈ ದ್ರವ್ಯಾಂತರಣ (ಟಾನ್ಸ್‍ಮ್ಯುಟೇಶನ್) ಪ್ರಕ್ರಿಯಗಳಲ್ಲಿ ಒಂದಿಷ್ಟು ರಾಶಿ (m) ನಷ್ಟವಾಗತ್ತದೆ. ವಿನಷ್ಯ ರಾಶಿ ಇ=mಛಿ2 ಸಮೀಕರಣದ ಪ್ರಕಾರ ಶಕ್ತಿಯಾಗಿ (ಇ) ಹೊರಹೊಮ್ಮುತ್ತದೆ. ಇಲ್ಲಿ ಛಿ ಬೆಳಕಿನ ಸ್ಥಿರವೇಗ. ಇದೇ ಸೌರಶಕ್ತಿ. ಹೀಲಿಯಮ್ ಬೀಜಗಳು ಸೂರ್ಯನಲ್ಲೇ ಜಮೆಗೊಳ್ಳುತ್ತವೆ. ಭೂಮಿಗೆ ಬರುತ್ತಿರುವ ಸೌರಶಕ್ತಿಯ ಒಟ್ಟು ಪ್ರಮಾಣ 1 ವರ್ಷದಲ್ಲಿ ಸುಮಾರು 4x1018 ಜೌಲ್‍ಗಳು. (ನೋಡಿ- ನಕ್ಷತ್ರ-ಶಕ್ತಿ)

	ಸೌರ ಉಷ್ಣತೆ: ಹೊರಮೈ (ದ್ಯುತಿಗೋಳ) ಉಷ್ಣತೆ 6000ºಅ. ಒಳಗಿಳಿದಂತೆ ಉಷ್ಣತೆ ಅತಿಶಯವಾಗಿ ಏರುವುದು. ಅಂಥ ಅಧಿಕ ಉಷ್ಣತೆಯಲ್ಲಿ ಸಕಲ ವಸ್ತುಗಳೂ ಅನಿಲವಾಗಿಬಿಡುವುವು. ಎಂದೇ ಸೂರ್ಯ, ವ್ಯಾಪಕವಾಗಿ ಎಲ್ಲ ನಕ್ಷತ್ರಗಳೂ ಅನಿಲರೂಪಿಗಳು. ಸೂರ್ಯಕೇಂದ್ರದ ಉಷ್ಣತೆ 20,000,000º ಅ ಇರಬಹುದೆಂದು ಅಂದಾಜು.			
	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ